ತ್ರಿಜಟೆ
	ಲಂಕೆಯಲ್ಲಿದ್ದ ಒಬ್ಬ ರಾಕ್ಷಸಿ. ರಾವಣ ಸೀತೆಯನ್ನು ಪಂಚವಟಿಯಿಂದ ಅಪಹರಿಸಿಕೊಂಡು ಹೋಗಿ ಅಶೋಕವನದಲ್ಲಿಟ್ಟು ಆಕೆಯ ಸುತ್ತಲೂ ಅನೇಕ ರಾಕ್ಷಸಿಯರನ್ನು ಕಾವಲಿರಿಸಿ ಈಕೆಯನ್ನು ಅವರೆಲ್ಲರ ಮೇಲ್ವಿಚಾರಣೆಯಲ್ಲಿಟ್ಟ. ಉಳಿದ ರಾಕ್ಷಸಿಯರು ಸೀತೆಯನ್ನು ಬಹಳವಾಗಿ ಪೀಡಿಸಿ, ರಾವಣನನ್ನು ವರಿಸುವಂತೆ ಬಲಾತ್ಕರಿಸುವಾಗ ಈಕೆ ಅವರೆಲ್ಲರಿಗೂ ಬುದ್ಧಿಹೇಳಿ, ತಾನು ಆಗತಾನೆ ಕಂಡ ಕನಸನ್ನು ವಿವರಿಸಿ ಅದರಲ್ಲಿ ರಾವಣನ ವಧೆಯಾಗಿ ಶ್ರೀರಾಮ ಜಯಶೀಲನಾದ ವಿಚಾರ ತಿಳಿಸಿ, ಆ ಕನಸು ನಿಜಕ್ಕೂ ನನಸಾಗುತ್ತದೆ ಎಂಬ ಭವಿಷ್ಯ ನುಡಿದು ರಾಕ್ಷಸಿಯರು ಸೀತೆಯ ತಂಟೆಗೆ ಹೋಗದಂತೆ ಮಾಡಿದಳು.			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ